ಎ ಬ್ಯೂಟಿಫುಲ್ ಮೈಂಡ್ ಆಸ್ಕರ್ ಪ್ರಶಸ್ತಿ ಪಡೆದಿದೆ ಎನ್ನುವುದಕ್ಕಿಂತಲೂ ಒಬ್ಬ ಶ್ರೇಷ್ಠ ಗಣಿತಜ್ಞನ ಜೀವನಕಥೆ ಆಧರಿಸಿ ತೆಗೆದ ಸಿನಿಮಾ ಎಂಬುದೇ ಬಹಳಷ್ಟುಆಕರ್ಷಣೆಗೊಳಗಾಗಿತ್ತು. ಆದರೆ ಒಂದು ನಿಜವಾದ ಕಥೆಯನ್ನು ಸಿನಿಮಾಕ್ಕೆ ಒಗ್ಗಿಸುವಾಗ ಪಡೆಯುವ ರೂಪ, ಕೈ ಬಿಟ್ಟು ಹೋಗಬಹುದಾದ ಸೂಕ್ಷ್ಮ ಸಂಗತಿ…ಇತ್ಯಾದಿ..ಅಂದರೆ ಅಡಾಪ್ಟೇಷನ್ ಸಂದರ್ಭದಲ್ಲಿ ಹೇಗೆ ಎಂಬುದನ್ನು ಬೇಳೂರು ಸುದರ್ಶನ್, ಕಾದಂಬರಿ, ಡಾಕ್ಯುಮೆಂಟರಿ ಹಾಗೂ ಸಿನಿಮಾ ನೋಡಿ ವಿಶ್ಲೇಷಿಸಿದ್ದಾರೆ.
2001 ರಲ್ಲೇ ಬಂದ ಈ ಸಿನೆಮಾದ ಬಗ್ಗೆ ನನಗೆ ಈಗಷ್ಟೇ ಹುಚ್ಚು ಹಿಡಿದಿದೆ. ಈ ಸಿನೆಮಾ ನೋಡಬೇಕೆಂದು ಬಯಸಿ ಬಯಸಿ ಎರಡು ವಾರಗಳ ಹಿಂದೆಯಷ್ಟೇ ಡಿವಿಡಿ ಸಂಗ್ರಹಿಸಿದೆ. ಆದರೆ ಎರಡು ತಿಂಗಳ ಹಿಂದೆ ಖರೀದಿಸಿದ ಸಿಲ್ವಿಯಾ ನಾಸರ್ ಬರೆದ ಎ ಬ್ಯೂಟಿಫುಲ್ ಮೈಂಡ್ ಪುಸ್ತಕವನ್ನು ನಾನು ಓದಿರಲಿಲ್ಲ. ಸರಿ, ಪುಸ್ತಕವನ್ನು ಓದಿದ ಮೇಲೆಯೇ ಸಿನೆಮಾ ನೋಡೋಣ. ಎಷ್ಟಂದ್ರೂ ಸಿನೆಮಾ ನೋಡೋದಕ್ಕೆ ಕೆಲ ತಾಸು ಸಾಕು. ಪುಸ್ತಕ ಓದೋದಕ್ಕೆ ನಿಜವಾಗ್ಯೂ ನನಗೆ ಎರಡು ವಾರ ಹಿಡೀತು. ಈ ಪುಸ್ತಕ, ಈ ಸಿನೆಮಾ, ಈ ಪುಸ್ತಕವನ್ನೇ ಆಧರಿಸಿದ ಇನ್ನೊಂದು ಡಾಕ್ಯುಮೆಂಟರಿ, ಈ ಸಿನೆಮಾದಲ್ಲಿರೋ ನೈಜ ಪಾತ್ರವಾದ ಜಾನ್ ನ್ಯಾಶ್‌ನನ್ನು ನೊಬೆಲ್ ಪ್ರಶಸ್ತಿ ವೆಬ್‌ಸೈಟಿನ ಪ್ರತಿನಿಧಿ ಭೇಟಿ ಮಾಡಿ ನಡೆಸಿದ ಸಂದರ್ಶನ ಎಲ್ಲವನ್ನೂ ಓದಿ, ನೋಡಿ ಈ ಲೇಖನ ಬರೆಯುತ್ತಿದ್ದೇನೆ...
ಮುಂದೆ ಓದಿ
You need to be a member of saangatya to add comments!
Join this Ning Network