ಸಾಂಗತ್ಯ ಸಂವಾದ ಆರಂಭಿಸುತ್ತಿರುವುದು ನಿಜಕ್ಕೂ ಖುಷಿಯ ಸಂಗತಿ. ಯಾವ ವಿಷಯ ಎಂದು ಕೇಳಿದ್ದೀರಿ. ನಾನು ಇಲ್ಲಿ ವಿಷಯವನ್ನು ಸಲಹೆ ಮಾಡುತ್ತಿಲ್ಲ. ಆದರೆ ನನ್ನೊಳಗಿನ ಒಂದು ಸಂಗತಿಯನ್ನು ತಿಳಿಸುತ್ತೇನೆ. ಅದೇ ಸಂವಾದಕ್ಕೆ ವಿಷಯವಾಗಬಹುದು : ಅಥವಾ ಆ ಎಳೆಯನ್ನು ಇಟ್ಟುಕೊಂಡೂ ಇನ್ನೂ ಹತ್ತಾರು ಸಂಗತಿಗಳ ಬಗ್ಗೆಯೂ ಚರ್ಚಿಸಬಹುದು.
ನಾನು ಹೀಗೇ ಸಿನಿಮಾಗಳನ್ನು ನೋಡುವ ಹವ್ಯಾಸಿ. ಸಿನಿಮಾದ ಭಾಷೆ ಸಂಪೂರ್ಣ ಅರ್ಥವಾಗಿಲ್ಲ. ಆದರೆ, ಒಂದಷ್ಟು ಮಟ್ಟಿಗೆ ಪರವಾಗಿಲ್ಲ. ಇದು ನನ್ನದೇ ಪ್ರಯತ್ನ. ಯಾವುದೇ ಪುಸ್ತಕ ಆಶ್ರಯ ಅಥವಾ ವಿಮರ್ಶೆಯ ಆಶ್ರಯಕ್ಕೆ ಹೋಗಲಿಲ್ಲ.
ನನಗಿಂದಿಗೂ ಕಾಡುವಂತದ್ದು ಎಂದರೆ ಚಿತ್ರ ವಿಮರ್ಶೆಯ ಬಗ್ಗೆ. ಅದರಲ್ಲೂ ಈಗಿನ ಪತ್ರಿಕಾ ವಿಮರ್ಶೆಗಳ ಬಗ್ಗೆ. ಎಂಟು -ಹತ್ತು ವಾಕ್ಯವೃಂದಗಳಲ್ಲಿ ಪ್ರತಿ ಭಾನುವಾರ ಪ್ರಕಟಗೊಳ್ಳುವ ವಿಮರ್ಶೆ ಯಾವ ತೆರನಾದ ಸುಖ ಯಾರಿಗೆ ನೀಡುತ್ತದೆ ಎಂಬುದು ತಿಳಿದಿಲ್ಲ. ಕಾರಣವಿಷ್ಟೇ, ಸಿನಿಮಾಸಕ್ತರಿಗೆ ಒಂದಿನಿತೂ ಆಸಕ್ತಿ ಮೂಡಿಸುವಂಥ ಸಂಗತಿಗಳಾಗಲೀ, ಮಾಹಿತಿಯಾಗಲೀ ಆ ಬರಹಗಳಲ್ಲಿರುವುದಿಲ್ಲ.
ನನ್ನ ಅನುಮಾನ ಏನೆಂದರೆ, ಆ ಬರಹ ಏನನ್ನು ಹೇಳೀತು ಎಂಬುದಕ್ಕೆ ಯಾವುದೇ ಅಂಶವಿಲ್ಲ. ಒಂದು ಚಿತ್ರದ ಬಗ್ಗೆ ಗಂಭೀರವಾಗಿ ಆಲೋಚಿಸುವುದು ಹಾಗೂ ಬರೆಯುವುದು ದಿನ ಪತ್ರಿಕೆಗಳಲ್ಲಿ ಸಾಧ್ಯವಿಲ್ಲ ಎಂಬ ಮಾತಿದೆ. ಇರಬಹುದು, ಹಾಗೆಂದು ಒಟ್ಟೂ ಬರೆದರೆ ಯಾರಿಗೆ ಲಾಭ ? ಈ ಮಾತು ಕೆಲವರಿಗೆ ಇಷ್ಟವಾಗದಿರಬಹುದು. ಅದು ಬೇರೆ ಸಂಗತಿ...
ಮುಂದೆ ಓದಿ
You need to be a member of saangatya to add comments!
Join this Ning Network