ಈ ಅಂಕಣದ ಹೆಸರೇ “ನಿಮ್ಮದೇ ಅಂಕಣ”. ಸಿನಿಮಾ, ಸಿನಿಮಾದ ಬಗೆಗಿನ ಅನುಭವ, ಸಿನಿಮಾ ಗ್ರಹಿಕೆ ಕುರಿತ ಅನಿಸಿಕೆ-ಅಭಿಪ್ರಾಯ ಎಲ್ಲವನ್ನೂ ಮುಕ್ತವಾಗಿ ಹಂಚಿಕೊಳ್ಳುವ ಅತಿಥಿ ಅಂಕಣ. ಪ್ರತಿ ಬುಧವಾರ ಪ್ರಕಟವಾಗುವ ಈ ಅಂಕಣಕ್ಕೆ ಎಲ್ಲರಿಗೂ ಮುಕ್ತ-ಮುಕ್ತ-ಮುಕ್ತ. ನಿಮ್ಮ ಲೇಖನಗಳನ್ನು saangatya@gmail.com ಗೆ ಕಳಿಸಿ. ಅಂದ ಹಾಗೆ ಈ ವಾರ ಅತಿಥಿಯೊಬ್ಬರು ಬರೆದ ಲೇಖನ ಪ್ರಕಟಿಸಲಾಗಿದೆ.
ಒಂದು ಚಿತ್ರ ನೋಡುವುದೆಂದರೆ ಹೇಗೆ ? ಯಾವ ರೀತಿ?
ಈ ಪ್ರಶ್ನೆಯನ್ನು ಇಟ್ಟುಕೊಂಡು ಹಲವು ದಿನಗಳಿಂದ ಉತ್ತರ ಹುಡುಕುತ್ತಿದ್ದೇನೆ. ನನಗೆ ಚಿತ್ರ ನೋಡುವ ಹುಚ್ಚು ಶುರುವಾಗಿದ್ದು ಇತ್ತೀಚೆಗೆ ಅಂದರೆ ನಾಲ್ಕೈದು ವರ್ಷಗಳಿಂದ. ಎಲ್ಲೋ ನೋಡಿದ ಒಂದು ಸಿನಿಮಾ (ಅದರ ಹಿಂದೆ ನೋಡುತ್ತಿಲ್ಲ ಎಂದಲ್ಲ ; ಸಿನಿಮಾ ಅರ್ಥವಾಗುತ್ತಿರಲಿಲ್ಲವೇನೋ) ನನ್ನನ್ನು ತೀವ್ರವಾಗಿ ಕಾಡಿಸಿತು. ಅದೆಂದರೆ “ಚಿಲ್ಡ್ರನ್ ಆಫ್ ಹೆವನ್’.
ಕ್ರಮೇಣ ನಾನು ಸಿನಿಮಾದೊಳಗಿನ ವರ್ತುಲಕ್ಕೆ ಸಿಲುಕಿದೆ. ಆದರೆ, ಅಂದಿನಿಂದ ಆರಂಭವಾದ ಈ ಚಿತ್ರ ಭಾಷೆಯನ್ನು ಅರಿಯುವ ಪ್ರಯತ್ನ ವ್ಯವಸ್ಥಿತವಾಗಿ ನಡೆದೇ ಇದೆ, ನಿಂತಿಲ್ಲ.
ನನ್ನ ಅನುಮಾನ ಆರಂಭವಾಗುವುದು ಇಲ್ಲೇ. ಒಂದು ಸಿನಿಮಾದೊಳಗೆ ನಾನು ಪೂರ್ವಸಜ್ಜಿತನಾಗಿ ಒಳಗೊಳ್ಳಬೇಕೋ ? ಅಥವಾ ಆ ಸಿನಿಮಾವೇ ನಮ್ಮೊಳಗೆ ಇಣುಕುತ್ತದೋ ಎಂಬುದು. ಈ ಮಾತು ಹೇಳಲಿಕ್ಕೆ ನನ್ನೊಳಗಿನ ಅನುಮಾನವೇ ಕಾರಣ. ಎಷ್ಟೋ ಬಾರಿ, ಹೊಸದಾಗಿ ತಂದ ಡಿವಿಡಿ ಗಳನ್ನು ನೋಡುವ ಮುನ್ನ ಇಂಟರ್ ನೆಟ್‌ನಲ್ಲಿ ಅ ಬಗೆಗಿನ ಮಾಹಿತಿಗಳನ್ನೆಲ್ಲಾ ಓದಿ ಸಿನಿಮಾ ನೋಡುವುದು ನನ್ನ ಚಾಳಿಯಾಗಿತ್ತು. ಅದೊಂದು ಥರ ಪೂರ್ವ ಸಿದ್ಧತೆ. ಆಗ ಸಿನಿಮಾ ಹೆಚ್ಚು ಅರ್ಥವಾಗಬಹುದು ಎಂಬುದು ನನ್ನ ಲೆಕ್ಕಾಚಾರವಾಗಿತ್ತು.
Keep reading →
You need to be a member of saangatya to add comments!
Join this Ning Network