ಈ ಬಾರಿ ಗುರುಸ್ವಾಮಿ ಅವರು ವಿವರಿಸಿರುವುದು “ರಾಜಾ ಹೃದಯ”ದ ವಿಶೇಷಗಳನ್ನು. ಬಹುಶಃ ಈ ಚಿತ್ರದ ಹೆಸರೇ ಕೇಳಿರುವವರು ಕಡಿಮೆ. ಒಂದು ಸುಸಜ್ಜಿತ ತಂಡದ ಬಗ್ಗೆ ಹೇಳುತ್ತಲೇ 1929 ರಲ್ಲೇ ಹುಟ್ಟಿಕೊಂಡ ಎರಡು ಭಿನ್ನ ಧಾರೆ ಬಗ್ಗೆ ಬರೆದಿದ್ದಾರೆ. ಓದಿ paramesvaraguruswamy@gmail.com ಗೆ ಪ್ರತಿಕ್ರಿಯಿಸಿ.
ಮೂಕಿ ಚಿತ್ರ “ವಸಂತ ಸೇನ” ಬಿಡುಗಡೆಯಾದ ವರ್ಷವೇ 1929 ರಲ್ಲಿ ಮತ್ತೊಂದು ಚಿತ್ರ “ರಾಜಾ ಹೃದಯ” ಪ್ರದರ್ಶನಗೊಂಡಿತು. ಇವುಗಳ ಮಧ್ಯೆ ಇರುವ ವಿಶೇಷವೆಂದರೆ ಎರಡೂ ಭಿನ್ನ ಧಾರೆಯವು. “ವಸಂತ ಸೇನ ” ದಲ್ಲಿ ನಿರ್ದೇಶಕ ಮತ್ತು ಕ್ಯಾಮೆರಾಮ್ಯಾನ್ ತಾಂತ್ರಿಕ ನಿಪುಣರು. ಉಳಿದಂತೆ ಎಲ್ಲರೂ ಹವ್ಯಾಸಿಗಳು. ಆದರೆ “ರಾಜಾ ಹೃದಯ” ಸಂಪೂರ್ಣ ಉಲ್ಟಾ.
ಈ ಚಿತ್ರ ನಿರ್ದೇಶಿಸಿದ ಹರಿಭಾಯಿ ದೇಸಾಯಿಯಿಂದ ಹಿಡಿದು ಚಿತ್ರ ನಿರ್ಮಿಸಿದ ಸೂರ್ಯ ಫಿಲಂಸ್ ಸಂಪೂರ್ಣ ವೃತ್ತಿಪರವಾದ ತಂಡ. ಮುಂಬಯಿಯಿಂದ ದಕ್ಷಿಣ ಭಾರತದ ದೇವಸ್ಥಾನ, ಪಾರಂಪರಿಕ ತಾಣಗಳನ್ನೆಲ್ಲಾ ಚಿತ್ರೀಕರಣಕ್ಕೆ ಬಳಸಿಕೊಳ್ಳಲು ಅರಸಿ ಬಂದವರು ಬೆಂಗಳೂರಿಗೂ ಬಂದರು. ಅಲ್ಲಿನ ಸೌಂದರ‍್ಯ ನೋಡಿ ಠಿಕಾಣಿ ಹೂಡಿದರು. ದಿವಾನರಾಗಿದ್ದ ಮಿರ್ಜಾ ಇಸ್ಮಾಯಿಲ್ ಅವರ ಬಂಗಲೆಯೊಂದನ್ನ್ನು ಕನ್ನಿಂಗ್‌ಹ್ಯಾಂ ರಸ್ತೆಯಲ್ಲಿ ಬಾಡಿಗೆಗೆ ಪಡೆದು “ಸೂರ್ಯ ಫಿಲಂಸ್’ನ ಸ್ಟುಡಿಯೋ ಆರಂಭಿಸಿದರು.
ಈ ಸ್ಟುಡಿಯೋದ ವಿಶೇಷ ಗೊತ್ತೇ ? ತಾಂತ್ರಿಕವಾಗಿ ಬಹಳ ನಿಪುಣರಾಗಿದ್ದ ಹರಿಭಾಯಿ ದೇಸಾಯಿ, ವಿಶ್ವದ ವಿವಿಧೆಡೆ ತಿರುಗಿ ಅಲ್ಲಿನ ಸ್ಟುಡಿಯೋಗಳನ್ನೆಲ್ಲಾ ನೋಡಿ ಬಂದವರು. ಹಾಗಾಗಿ ಈ ಸ್ಟುಡಿಯೋಗೆ ಕೃತಕ ಬೆಳಕನ್ನು ಬಳಸಲೇ ಇಲ್ಲ. ಎಲ್ಲವೂ ಸೂರ್ಯನದ್ದೇ. ಅವರು ರೂಪಿಸುತ್ತಿದ್ದ ಚಿತ್ರಗಳೂ ಸಂಪೂರ್ಣ ಸೂರ್ಯನ ಬೆಳಕೇ. ಕಾರಣ, ಸ್ಟುಡಿಯೋದಲ್ಲಿ ಲಭ್ಯವಾಗುತ್ತಿದ್ದುದು ಸೂರ್ಯನ ಬೆಳಕೇ. ಉಳಿದದ್ದು ಹೊರಾಂಗಣ. ಆ ರೀತಿಯಲ್ಲಿ ಸುಸಜ್ಜಿತಗೊಳಿಸಲಾಗಿತ್ತು.
ಥಾಮಸ್ ಅಲ್ವಾ ಎಡಿಷನ್ ರೂಪಿಸಿದ್ದ “ಬ್ಲ್ಯಾಕ್ ಮಾರಿಯಾ” ಎಂಬ ಸ್ಟುಡಿಯೋ ಸಹ ಹಾಗೆಯೇ. ದೇಸಾಯಿಯವರ ಈ ಸ್ಟುಡಿಯೋ ಬಳಕೆಯಾಗಿ, ಬಳಕೆಯಾಗಿ “ಸೂರ್ಯ ಫಿಲಂಸ್ ಸ್ಟುಡಿಯೋ’ ಎನ್ನೋ ಬದಲಿಗೆ “ಸನ್‌ಲೈಟ್’ ಸ್ಟುಡಿಯೋ ಎಂದೇ ಜನಪ್ರಿಯವಾಯಿತು. ವಿಶೇಷ ಇಷ್ಟಕ್ಕೇ ಮುಗಿಯಲಿಲ್ಲ. ಎಷ್ಟೊಂದು ವೃತ್ತಿಪರ ಸ್ಟುಡಿಯೋ ಆಗಿತ್ತೆಂದರೆ, ಚಿತ್ರರಂಗದ ಪ್ರತಿ ವಿಭಾಗಗಳಿಗೂ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿತ್ತು. ಉದಾಹರಣೆಗೆ ನಟರ ವೇಷಭೂಷಣಕ್ಕೆ, ಚಿತ್ರಕಥೆ ಬರೆಯುವವರಿಗೆ, ಬೆಳಕು ವಿನ್ಯಾಸ ವಿಭಾಗಕ್ಕೆ, ಛಾಯಾಗ್ರಾಹಕರಿಗೆ, ಸಾಹಸ ನಿರ್ವಹಿಸುವವರಿಗೆ…ಹೀಗೆ ಎಲ್ಲವೂ ಪ್ರತ್ಯೇಕ. ಸಂಸ್ಕರಣಾ ಮತ್ತು ಸಂಕಲನ ಘಟಕವೂ ಅಲ್ಲೇ ರೂಪಿಸಿದ್ದರಿಂದ ಇಡೀ ಚಿತ್ರ ಅಲ್ಲೇ ನಿರ್ಮಾಣವಾಗುತ್ತಿತ್ತು.
ಮುಂದೆ ಓದಿ
You need to be a member of saangatya to add comments!
Join this Ning Network